¡Sorpréndeme!

ಪ್ರಣಾಮ್ ದೇವರಾಜ್ ನಿಧಿ ಕುಶಾಲಪ್ಪ ಅಭಿನಯದ ಕುಮಾರಿ 21F ಚಿತ್ರದ ಟೀಸರ್ ರಿಲೀಸ್ | Filmibeat Kannada

2018-01-08 47 Dailymotion

ನಟ ದೇವರಾಜ್ ಎರಡನೇ ಪುತ್ರ ಪ್ರಣಾಮ್ ದೇವರಾಜ್ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ತಂದೆ ಮತ್ತು ಅಣ್ಣನ ಹಾದಿಯಲ್ಲಿ ಪ್ರಣಾಮ್ ಕೂಡ ತಮ್ಮ ಸಿನಿಮಾ ಜರ್ನಿ ಶುರು ಮಾಡಿದ್ದಾರೆ. ಅಂದಹಾಗೆ, ಪ್ರಣಾಮ್ ಮೊದಲ ಸಿನಿಮಾದ ಮುಹೂರ್ತ ಕೆಲ ತಿಂಗಳುಗಳ ಹಿಂದೆ ನಡೆದಿತ್ತು.ಪ್ರಣಾಮ್ 'ಕುಮಾರಿ 21F' ಸಿನಿಮಾದ ಮೂಲಕ ಲಾಂಚ್ ಆಗುತ್ತಿದ್ದಾರೆ. ಅವರ ಮೊದಲ ಸಿನಿಮಾದ ಹಾಡಿನ ಟೀಸರ್ ಇದೀಗ ರಿಲೀಸ್ ಆಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಬಿಡುಗಡೆ ಮಾಡಿರುವ ಈ ಟೀಸರ್ ಯೂ ಟ್ಯೂಬ್ ನಲ್ಲಿ ಲಭ್ಯವಿದೆ. ಈ ಚಿತ್ರ ತೆಲುಗಿನ 'ಕುಮಾರಿ 21F' ಚಿತ್ರದ ರಿಮೇಕ್ ಆಗಿದ್ದು, ಸಖತ್ ಹಾಟ್ ದೃಶ್ಯಗಳು ಸಿನಿಮಾದಲ್ಲಿ ಇದೆ.ಒಬ್ಬ ಯುವಕ ಮತ್ತು ಯುವತಿಯ ಹದಿ ಹರೆಯದ ಭಾವನೆಗಳನ್ನು ಚಿತ್ರದಲ್ಲಿ ಹೇಳಲಾಗಿದೆ. ಮೊದಲ ಸಿನಿಮಾದಲ್ಲಿಯೇ ತುಟಿಗೆ ಮುತ್ತಿಟ್ಟು ಪ್ರಣಾಮ್ ದೇವರಾಜ್ ಸಖತ್ ಬೋಲ್ಡ್ ನಟನೆ ಮಾಡಿದ್ದಾರೆ.